ತಸ್ಲೀಮಾ ನಸ್ರೀನ್( ) ಜಾಗೃತ ಸ್ತ್ರೀ ಶಕ್ತಿಯ ಸಂಕೇತ. ಜೊತೆಗೆ ಬಾಂಗ್ಲಾದೇಶದ ವಿವಾದಿತ ಲೇಖಕಿಯೆಂದೇ ಗುರ್ತಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಈಕೆ ತಮ್ಮ ನಲವತ್ತೇಳರ ಹರೆಯದಲ್ಲಿ "ಲಜ್ಜಾ" ಎಂಬ ಕಾದಂಬರಿ ಯನ್ನು ಬರೆಯುವುದರ ಮೂಲಕ ವಿವಾದಕ್ಕೆ ಈಡಾಗಿ, ಅವರ ದೇಶದಲ್ಲಿ ಗಡೀಪಾರಿಗೆ ಗುರಿಯಾದರು. ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡು ಬದುಕು ನಡೆಸುತ್ತಿರುವ ಅವರು ನೆಮ್ಮದಿಯ ಗೂಡನ್ನು ಅರಸುತ್ತಾ ಬಾಂಗ್ಲಾದೇಶವನ್ನು ಬಿಟ್ಟು ಬಂದು ಭಾರತದ ಆಶ್ರಯದಲ್ಲಿದ್ದಾರೆ. == ಜನನದ ವಿವರಗಳು == ಹುಟ್ಟಿದ ದಿನ:25 ಆಗಸ್ಟ್ 1962 ; ತಂದೆ; ರಾಜಾಬ್ ಆಲಿ, ತಾಯಿ ಇದುಲ್ ಆರಾ( ); ಹುಟ್ಟಿದ ಪ್ರದೇಶ:ಮೈಮೆನ್ಸಿಂಗ್, ಬಾಂಗ್ಲಾದೇಶ್. ತಂದೆ ಒಬ್ಬ ವೈದ್ಯ. == "ಲಜ್ಜಾ" ಕೃತಿಯೊಳಗೆ == "ಲಜ್ಜಾ" ಕೇವಲ ಒಂದು ಕಾದಂಬರಿಯಾಗಿರದೆ ಅದು ಆ ಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಮಾಜೋಧಾರ್ಮಿಕ ಆಯಾಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ೯೦ರ ದಶಕದಲ್ಲಿ ಭಾರತದಲ್ಲಿ ಬಾಬ್ರಿಮಸೀದಿಯನ್ನು ಕೆಡವಿದ ಪ್ರಕರಣವು ನೆರೆಯ ಬಾಂಗ್ಲಾದೇಶದಲ್ಲಿ ಎಷ್ಟೊಂದು ಹಿಂಸಾಚಾರಕ್ಕೆ ಕಾರಣವಾಯಿತೆಂಬುದನ್ನು ಪ್ರತ್ಯಕ್ಷದರ್ಶಿಯಾದ ಲೇಖಕಿ ಅದನ್ನು ನಿಖರವಾದ ಅಂಕಿ-ಅಂಶಗಳ ಮೂಲಕ ಹೇಳುತ್ತಾ ಸಾಗುತ್ತಾರೆ. ಬಾಂಗ್ಲಾದೇಶದಲ್ಲಿರುವ ಎರಡೂವರೆ ಕೋಟಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ಮಾರಣಹೋಮ, ಮನೆಗಳ ಲೂಟಿ, ಬೀದಿ ಮಧ್ಯೆಯೇ, ಹಾಡುಹಗಲೇ ನಡೆದ ಪೈಶಾಚಿಕ ಕೃತ್ಯಗಳು, ಸಾಮೂಹಿಕ ಅತ್ಯಾಚಾರಗಳು, ಇದೆಲ್ಲವನ್ನು ಕಂಡರೂ ಜಾಣಮೌನ, ಜಾಣಕುರುಡು ಪ್ರದರ್ಶಿಸುವ ಸರ್ಕಾರದ ರೀತಿ ನೀತಿಗಳು, ಅಮಾಯಕ ಹಿಂದೂಗಳನ್ನು ಬೀದಿ ನಾಯಿಗಿಂತ ಕಡೆಯಾಗಿಸಿ, ಚಿತ್ರಹಿಂಸೆ ನೀಡಿದ ಹೇರಳ ದಾಖಲೆಗಳು ಈ ಕೃತಿಯಲ್ಲಿವೆ. == ತಲೆದಂಡದಂತಹ ಕ್ರೂರ ಶಿಕ್ಷೆಗೆ ಗುರಿಯಾದುದು == ತಮ್ಮವಿವಾದಾತ್ಮಕ ಕಾದಂಬರಿಯಿಂದ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಬಂದ ಮೇಲೆ ತಮ್ಮ ತವರೂರು ಬಾಂಗ್ಲಾದೇಶದಿಂದ 1994ರಿಂದ ಸ್ವಯಂ ದೇಶಭ್ರಷ್ಟರಾಗಿರುವ ತಸ್ಲೀಮಾ ನಸ್ರೀನ್‌ ಸದ್ಯ ಸ್ವೀಡನ್‌ನ ನಾಗರಿಕರು. ಆದರೆ 2004ರಿಂದ ನಿರಂತರವಾಗಿ ಅವರು ಭಾರತೀಯ ವೀಸಾ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಅವರು ಕಳೆದ ಎರಡು ದಶಕಗಳಲ್ಲಿ ಅಮೇರಿಕಾ, ಯುರೋಪ್ ಮತ್ತು ಭಾರತದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಭಾರತದಲ್ಲೇ ಶಾಶ್ವತವಾಗಿ ನೆಲೆಸುವ ಆಶಯ ವ್ಯಕ್ತಪಡಿಸಿದ್ದು, ವಿಶೇಷವಾಗಿ ಕೋಲ್ಕತಾದಲ್ಲಿ ಇರಲು ಬಯಸುವುದಾಗಿ ಹೇಳುತ್ತ ಬಂದಿದ್ದಾರೆ. 2007ರಲ್ಲಿ ಮುಸ್ಲಿಮರ ಒಂದು ವರ್ಗದಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಸರಣಿಯ ಕಾರಣಕ್ಕೆ ಕೋಲ್ಕತಾವನ್ನು ಬಿಟ್ಟು ತೆರಳಬೇಕಾಗಿ ಬಂದಿತ್ತು ತಸ್ಲೀಮಾ ನಸ್ರೀನ್ ಅವರಿಗೆ ಭಾರತದಲ್ಲಿ ದೀರ್ಘಕಾಲ ವಾಸ ಮಾಡಲು ಅನುಮತಿ ನೀಡುವ ವೀಸಾ ಸೌಲಭ್ಯವನ್ನು ಕೇಂದ್ರ ಸರಕಾರ ಒದಗಿಸಿದೆ. ತಸ್ಲೀಮಾ ನಸ್ರೀನ್ ಮಾನವೀಯತೆಯಿಂದ, ಅಮಾಯಕ ಹಿಂದುಗಳ ಮೇಲೆ ನಡೆದ ಹಿಂಸಾಚಾರದಿಂದ ಆರ್ದ್ರಗೊಂಡು ತಮ್ಮ ಕೃತಿಯ ಮೂಲಕ ಸಾತ್ವ್ತಿಕವಾಗಿ ಪ್ರತಿಭಟಿಸುತ್ತಾರೆ. ಅವರು ಮತಧರ್ಮದ, ಮೂಲಭೂತವಾದಿಗಳ ಅಪಾಯಕಾರಿ ಪ್ರವೃತ್ತಿಯನ್ನು ವಸ್ತುವಾಗಿಸಿದ ಈ ಕೃತಿ ಯಿಂದಾಗಿ ಮುಸ್ಲಿಂ ಸಂಘಟನೆಗಳ ನೇರ ವಕ್ರದೃಷ್ಟಿಯನ್ನು ಎದುರಿಸಬೇಕಾಯಿತು. ಆಕೆಯನ್ನು ಬಾಂಗ್ಲಾದೇಶ ಗಡೀಪಾರು ಮಾಡಲು ಕಾರಣ ಒಬ್ಬ ಮುಸ್ಲಿಂ ಮಹಿಳೆಯಾಗಿದ್ದು ಕೊಂಡು ಕೃತಿಯಲ್ಲಿ ಹಿಂದೂಗಳನ್ನು ಸಹೋದರರಂತೆ ಚಿತ್ರಿಸಿದ್ದು. ಧರ್ಮಾಂಧರ ಹಿಡಿತದಲ್ಲಿದ್ದ ಬಾಂಗ್ಲಾದೇಶದ ಸರ್ಕಾರ ನಿರ್ಲಜ್ಜವಾಗಿ ಆಕೆಯ ಎಲ್ಲಾ ಕೃತಿಗಳನ್ನು ಬಹಿಷ್ಕರಿಸಿದೆ. ಅಲ್ಲಿನ ಧಾರ್ಮಿಕ ಮುಖಂಡರು ಆಕೆಯನ್ನು ತಲೆದಂಡದಂತಹ ಕ್ರೂರ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ. ಕೆಲವು ಉಗ್ರ ಧಾರ್ಮಿಕ ಸಂಘಟನೆಗಳು ಅವರ ತಲೆಗೆ ಬೆಲೆ ಕಟ್ಟಿವೆ. ಅವರನ್ನು ಹಿಡಿದು ಕೊಟ್ಟವರಿಗೆ ಭಾರಿ ಬಹುಮಾನವನ್ನು ಘೋಷಿಸಿವೆ. ಅವರನ್ನು ಕೊಲ್ಲಲು ನಿರಂತರ ಷಡ್ಯಂತ್ರಗಳನ್ನು ರೂಪಿಸುತ್ತಲೇ ಇವೆ. == ಸಾಹಿತ್ಯದ ಕೃಷಿ == === ಕಾವ್ಯಗಳು === : 1995 ಷಿಕೋರೇ ಬಿಪುಲ್ ಖುಧಾ ( ), 1986 ನಿರ್ಭಾಷಿತೋ ಬಾಹಿರೇ ಓಂತೊರೇ ( ), 1989 ಅಮರ್ ಕೀಚೂ ಅಷೇ ನೇ( ’ ), 1990 ಆತೋಲೇ ಓಂತೊರಿನ್ ( ), 1991 ಬಾಲಿಕರ್ ಗೊಲ್ಲಾ ಚೂತ್ (ಬಾಲಕಿಯರ ಆಟೆ), 1992 ಬೆಹೂಲಾ ಫ್ಲಾಟೆಡ್ ದಿ ರಾಫ್ ಅಲೊನ್ ( ), 1993 ಆಯ್ ಕೊಸ್ಟೋಝೇಪೇ,ಜೀಬೊನ್ ದೇಭೋಮೇಪೇ ( , ’ ), 1994 నిర్బాషితో నరీర్ కొబితా (నిర్వాసము నుండి పద్యాలు), 1996 ಜೊಲೊಪೊದ್ಯೋ (ಚಂಗಳವೆ), 2000 ಖಾಳೀ ಖಾಳೀ ಲಗೇ ( ), 2004 ಖಿಚ್ಚುಕ್ಕನ್ ಥಾಕೋ (ಸ್ವಲ್ಪ ತಡಿ ), 2005 === ಲೇಖನಗಳು === ನಿರ್ಬಾಚಿತೋ ಕಾಲಮ್ (ಆಯ್ದ ಕಾಲಮ್ಸ್) ಜಾಬೋನ ಕೇನೋ ಜಾಬೋ (ನಾನು ಹೋಗುವುದಿಲ್ಲ; ಏಕೆ ಹೋಗಬೇಕು?) ನೊಷ್ಟೊ ಮೇಯೇರ್ ನೊಷ್ಟೊ ಗೊದ್ದೋ( ) ಛೋಟೋ ಛೋಟೋ ದುಖ್ಖೋಕೊಥಾ (ಸಣ್ಣ ಸಣ್ಣ ಕಷ್ಟಗಳ ಕಥೆ) == ನಿಷೇಧಿಸಲಾಗಿದ್ದ ಕೃತಿಗಳು == ಈ ಕೆಳಗಿನ ಕೃತಿಗಳನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗೆದೆ ಲಜ್ಜಾ(:): ಅಮರ್ ಮೆಯೇ ಬೆಲ( ) ಉತಲ್ ಹವಾ( ) ದ್ವೀಖೋಂದಿತೋ() ಕೊ() ಸೆಯ್ ಸಬ್ ಅಂಥಕಾರ್( ) == ಗ್ರಂಥ ನೆರವು == ಲಜ್ಜಾ - ಹಿಂದಿ: ತಸ್ಲೀಮಾ ನಸ್ರೀನ್, ಕನ್ನಡಕ್ಕೆ : ರಾಮಣ್ಣ ಆರೆಜ್ಜೆ == ಉಲ್ಲೇಖ ==